ದಿನಾಂಕ 25-12-2011ರಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ ಸಭಾಂಗಣದಲ್ಲಿ ಕೆಳದಿ ಕವಿಮನೆತನದವರ ಮತ್ತು ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಸಂಭ್ರಮದಿಂದ ನಡೆಯಿತು. ಆ ಸಂದರ್ಭದ ಕೆಲವು ದೃಷ್ಯಾವಳಿಗಳು ಇಲ್ಲಿವೆ.
ವೇದಿಕೆಯಲ್ಲಿ ಆಸೀನರಾಗಿರುವ ಶ್ರೀ/ಶ್ರೀಮತಿಯರಾದ: ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ. ಸಿ.ಎಸ್.ಕೃಷ್ಣಸ್ವಾಮಿ. ಗಿರಿಜಾಂಬಾಕುಮಾರಸ್ವಾಮಿ, ಕುಮಾರಸ್ವಾಮಿ.
ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭ
ಬಿಂದುರಾಘವೇಂದ್ರರಿಂದ ಗಮನ ಸೆಳೆವ ನಿರೂಪಣೆ
ಜ್ಯೋತಿ ಬೆಳಗಿ ಉದ್ಘಾಟನೆ
ಸ್ವಾಗತ ಮತ್ತು ಪರಿಚಯ ಮಾಡಿದ ಶ್ರೀ ಸತ್ಯಪ್ರಸಾದ್
ಶ್ರೀ ಕ.ವೆಂ.ನಾಗರಾಜರ ಪ್ರಾಸ್ತಾವಿಕ ಮಾತು
ಶ್ರೀ ಸಾ.ಕ.ಕೃಷ್ನಮೂರ್ತಿಯವರು ರಚಿಸಿದ ಕಲಾಕೃತಿಗಳು
ವಸ್ತುಪ್ರದರ್ಶನದ ಕೆಲವು ದೃಷ್ಯಗಳು
ಕೆಳದಿ ಸಂಸ್ಥಾನದ ಅರಮನೆ ಕವಿ ಮನೆತನದ ಅಮರ ವಂಶ ವೃಕ್ಷದ ಮೇಲೆ ಮೂಡಿರುವ ಸೂರ್ಯನ ಬೆಳಕು |
ಕು. ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಾರಿಕೆ
ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ 'ನಮ್ಮ ಕುಟುಂಬ-ನಾವು-ನಮ್ಮವರು' ಎಂಬ ವಿಷಯದ ಸಂವಾದ ಕಾರ್ಯಕ್ರಮದ ಮುಖ್ಯಭಾಗವಾಗಿ ಎಲ್ಲರ ಮೆಚ್ಚುಗೆ ಗಳಿಸಿತು
ಶ್ರೀ ಕವಿ ಸುರೇಶರ ಇಂಗ್ಲಿಷ್ ಗದ್ಯಾನುವಾದಿತ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ ಮುಖ್ಯ ಅತಿಥಿ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರಿಂದ
'ಕವಿಕಿರಣ'ದ ಡಿಸೆಂಬರ್ ಸಂಚಿಕೆಯ ಬಿಡುಗಡೆ- ಶ್ರೀ ಸು.ರಾಮಣ್ಣನವರಿಂದ
ಮುಖ್ಯ ಅತಿಥಿಗಳ ಸಂದೇಶ
ಶ್ರೀ ನಾಗರಾಜ್ ಅಥವಾ ಶ್ರೀ ಸುರೇಶ ಇವರು ಮೇಲಿನ ದೃಶ್ಯಾವಳಿಗೆ ಪೂರಕವಾಗಿ ವಿವರಣೆಯನ್ನು ಪ್ರತೀ ದೃಶ್ಯದ ಕೆಳಗೆ ಬರೆದರೆ ಸೂಕ್ತವೆನಿಸುತ್ತೆ.
ಪ್ರತ್ಯುತ್ತರಅಳಿಸಿ