ಬುಧವಾರ, ನವೆಂಬರ್ 13, 2013

ಆಮೇಲಾದರೂ ನಿಮ್ಮ ಅಪ್ಪ-ಅಮ್ಮನ ಮನೆಗೆ ಬನ್ನಿ

ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ  ನೆನಪುಗಳು ಕಾಡುತ್ತಿವೆ.  ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ ನೆನಪಾಗುತ್ತಿದ್ದಾರೆ
ಇವರೆಲ್ಲರೂ ನೆನಪಾಗುತ್ತಿರುವುದು ಅವರ "ಮಾತೃಹೃದಯದಿಂದ".ಅಪ್ಪನಿಗೂ ಇದೇ ಅನ್ವಯಿಸುತ್ತದೆ.
ನಿತ್ಯದ ಹೊಟ್ಟೆ ತುಂಬಲು ತುತ್ತು ಅನ್ನ ಇಲ್ಲವೇ ಇಲ್ಲ. 5X10 ಅಡಿಯ ಹಳೆಯ ಜಮಖಾನದ  ಮೇಲೆ ಮಲಗುತ್ತಿದ್ದೆವು  ಮಕ್ಕಳೆಲ್ಲಾ. ಬಹುಷ: ಆ ಜಮಖಾನವೂ ನಮ್ಮ  ಪುಟ್ಟನಂಜತ್ತೆ ಮನೆಯಿಂದ ತಂದಿದ್ದಿರಬೇಕು. ಗೌರತ್ತೆಗೆ ಒಂದು ಗೋಣೀಚೀಲ. ನಾವಾರು ಜನ ಮಕ್ಕಳು.ನಮ್ಮಮ್ಮ ಯಾವಾಗ ಮಲಗಿ ಯಾವಾಗ ಏಳುತ್ತಿದ್ದರು ಗೊತ್ತೇ ಇಲ್ಲ. ಯಾವಾಗಲೋ ನಮ್ಮ ನಡುವೆ ಮಲಗಿ ಎಲ್ಲರಿಗೂ ಮುಂಚೆ ಎದ್ದು ತಮ್ಮ ಕೆಲಸದಲ್ಲಿ ತೊಡಗುತ್ತಿದ್ದರು.ನಮ್ಮ ದೊಡ್ದಮ್ಮ ಒಂದು ಚಾಪೆಯ ಮೇಲೆ ಮಲಗುತ್ತಿದ್ದರು. ಜೊತೆಗೆ ನಮ್ಮ ಅಜ್ಜಿ [ತಂದೆಯವರ ತಾಯಿ] ಅಮ್ಮನ ಅಮ್ಮ. ನನಗೆ ತಿಳುವಳಿಕೆ ಬಂದಾಗ ನಮ್ಮ ಮನೆಯಲ್ಲಿದ್ದ ಜನ ಇವರು. ಅದಕ್ಕೆ ಮುಂಚೆ ಮೂರು ಮಕ್ಕಳೊಡನೆ ನಮ್ಮ  ಸೋದರತ್ತೆ ಪುಟ್ಟನಂಜಮ್ಮ ನ ಕುಟುಂಬವೂ ಕೆಲಕಾಲ ನಮ್ಮ ಮನೆಯಲ್ಲಿಯೇ ಇದ್ದರಂತೆ. ಪಾಪ! ನಮ್ಮ ಮಾವನ ಅಕಾಲಿಕ ಮರಣದ ಪರಿಣಾಮ ನಮ್ಮ ಸೋದರತ್ತೆಯ ಸಂಸಾರವನ್ನು  ಚಿಕ್ಕಮಗಳೂರಿನಿಂದ ನಮ್ಮಪ್ಪ ಕರೆದುಕೊಂಡು ಬಂದಿದ್ದರಂತೆ. ಅವರ ಮನಸ್ಸು ಹೇಗಿದೆ ನೋಡಿ, ಮಕ್ಕಳಿಗೆ ಹಾಕಲು ತುತ್ತು     ಅನ್ನಕ್ಕೆ ದಾರಿದ್ರ್ಯವಿದ್ದರೂ ಮಾನಸಿಕ ದಾರಿದ್ರ್ಯವಿರಲಿಲ್ಲ. ಒಂದು ಎತ್ತಿನ ಗಾಡಿ ಮಾಡಿಕೊಂಡು ಹೋಗಿ ಅಕ್ಕ ಮಕ್ಕಳನ್ನು ಕರೆದು ಕೊಂಡು ಬಂದೇ ಬಿಟ್ಟರು. ನಮ್ಮ ಪುಟ್ಟನಂಜತ್ತೆಯ ಮನೆಯಲ್ಲಿದ್ದ ಬೆಂಚುಗಳು, ಹಂಡೆ,ಪಾತ್ರೆ ಪಗಡಿ ಎಲ್ಲವೂ ನಮ್ಮ ಮನೆಗೆ ಸೇರಿದ್ದಾಯ್ತು. ಈಗಲೂ ಎರಡು ಬೆಂಚುಗಳನ್ನು ಸೇರಿಸಿ ನನ್ನ ತಮ್ಮ ಮಂಚದಂತೆ ಮಾಡಿಕೊಂಡು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾನೆ. ಆ ಮಂಚವನ್ನು ನೋಡಿದೊಡನೆ  ನಮ್ಮ ಅತ್ತೆ-ಮಾವ ನೆನಪಾಗುತ್ತಾರೆ.
ಯಾಕೆ ಇಷ್ಟೆಲ್ಲಾ ಮನೆಪುರಾಣವನ್ನು ಬರೆದೆನೆಂದರೆ  ಅದರಿಂದ ಇಂದಿನ ಮಕ್ಕಳು ಕಲಿಯುವುದು ಬಹಳ ಇದೆ. ಆದರೆ ಆಡಂಬರದ ಜಗತ್ತಿಗೆ ಬಲಿಯಾಗಿರುವ ಇಂದಿನ ಜನರಿಗೆ ಅದು ಅರ್ಥವಾಗುವುದಿಲ್ಲ ಎಂಬ ಮಾತು ಬೇರೆ. ಆದರೂ ನಮ್ಮ ಕಾಲದ್ದನ್ನು ನಾವು ದಾಖಲು ಮಾಡಿಬಿಡುವುದು ಸೂಕ್ತವೆಂದು ನನ್ನ ಭಾವನೆ. ಅದರ ಪ್ರಯೋಜನ ಆದರೆ ಸಂತೋಷ. ಆಗದಿದ್ದರೆ ಅವರಿಗೇ ನಷ್ಟ.

ಅದೇನು ಲಾಭ ನಷ್ಟದ ಮಾತು ಅಂತೀರಾ?

ಅಂದು ಆರ್ಥಿಕ ಬಡತನ ಬಹಳವಾಗಿತ್ತು ನಿಜ. ಆದರೆ ಪ್ರೀತಿ, ವಿಶ್ವಾಸ,ವಾತ್ಸಲ್ಯ,ಮಮಕಾರ, ನಮ್ಮವರೆನ್ನುವ ಭಾವ ತೀವ್ರವಾಗಿತ್ತು. ಅದರ ಪರಿಣಾಮ ಮನೆಯಲ್ಲಿ ಸೆಕ್ಯೂರಿಟಿ ಇತ್ತು. ಮನೆಯಲ್ಲಿದ್ದ  ಹತ್ತು ಹನ್ನೆರಡು  ಜನರಲ್ಲಿ ಯಾರೋ ಒಬ್ಬರಿಗೆ ಆರೋಗ್ಯ ತಪ್ಪಿದರೆ ಸುಧಾರಿಸಲು ನಾಲ್ಕಾರು ಜನರು ಇರುತ್ತಿದ್ದರು. ನಿಜ ಹೇಳುವೆ. ನಮಗೆ ರುಚಿ ರುಚಿಯಾದ ಆಹಾರ ಸಿಕ್ಕದೆ ಇದ್ದಿರಬಹುದು. ಆದರೆ ನಮ್ಮಪ್ಪ ಅನ್ನಮ್ಮ ,ನಮ್ಮ ಗೌರತ್ತೆ , ಅವರ ಪ್ರಾಣ ಒತ್ತೆ ಇಟ್ಟು ನಮ್ಮ ಹೊಟ್ಟೆಗೆ ಏನೋ ಹೊಂದಿಸುತ್ತಿದ್ದರು. ಅದು ದೊಡ್ದ ಕತೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಆದರೆ ಮಕ್ಕಳು ಯಾರಿಗಾದರೂ ಹುಶಾರು ತಪ್ಪಿದ್ದರೆ ಮೂಲೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದ ನಮ್ಮಜ್ಜಿಯ      ಮುಂದೆ ಒಂದು ಚಾಪೆ ಹಾಕಿ ಮಕ್ಕಳನ್ನು ಮಲಗಿಸಿದರೆ ಸಾಕು ಅವರ ಕೈ ಮಕ್ಕಳ ತಲೆಯನ್ನು ಸವರಲು ಶುರುವಾಗುತ್ತಿತ್ತು. "ಅಯ್ಯೋ ಮುಂಡೇದೇ, ಜ್ವರ ಬಂದು ಬಿಟ್ಟಿದೆಯಲ್ಲಾ! ಆ ದೇವರಿಗೆ ಕಣ್ಣಿಲ್ಲವೇ, ನಿಮ್ಮಂತ ಮಕ್ಕಳನ್ನು ಗೋಳುಹೊಯ್ದುಕೊಳ್ಳುತ್ತಾನಲ್ಲಾ! ಕಣ್ಮುಚ್ಚಿ ಮಲಗು ಕಂದಾ ನಿನಗೆ ನಿದ್ರೆ ಬರೆಸುವೆನೆಂದು ಹೇಳುತ್ತಾ ಅವರು ತಲೆ ತಡವರೆಸುತ್ತಿದ್ದರೆ ಯಾವಾಗ ನಿದ್ರೆ ಬರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ.

ಈಗ ಹೇಳಿ ಆ ಪ್ರೀತಿಯ ಮಾಂತ್ರಿಕ ಕೈಗಿರುವ ಶಕ್ತಿ ನಿಮ್ಮ ಯಾವ ವೈದ್ಯರಿಗಿದೆ?

ಇಂದು......
ಜ್ವರ ಬಂತು, ಸ್ಟ್ರೆಸ್ ನಿಂದಾಗಿ ವಿಪರೀತ ತಲೆನೋವು, ಬಿ.ಪಿ ಹೆಚ್ಚಾಯ್ತು, ಏನೋ ಸರಿ ಇಲ್ಲವೆನಿಸಿದಕೂಡಲೇ ವೈದ್ಯರಿಗೆ  ಫೋನ್ ಮಾಡಿ ಅವರು ಬಂದರೆ ಸರಿ ಇಲ್ಲದಿದ್ದರೆ ಕಾರ್ ನಲ್ಲಿ ಕೂರಿಸಿಕೊಂದು ಹೋಗಿ ಒಂದು ಇಂಜಕ್ಷನ್ ಚುಚ್ಚಿಸಿ, ಬರುವಾಗಲೇ ಎಳನೀರು ತಂದು ,ಡಾಕ್ಟರ್ ಕೊಟ್ಟ  ಸ್ಟ್ರಾಂಗ್ ಡೋಸ್    ಕ್ಯಾಪ್ಸುಲ್ ನುಂಗಿ ಹೊದ್ದಿಗೆ ಹೊದ್ದು ಮಲಗಿದರೆ ಮುಗೀತು.ನಿಜ ಹೇಳಿ, ಆರೋಗ್ಯತಪ್ಪಿದವರ ಪಕ್ಕದಲ್ಲಿದ್ದು ಅವರ ಮೈ ತಡವರಿಸುತ್ತ, ಅವರಿಗೆ "ನಾನಿದ್ದೇನೆ ಹೆದರ ಬೇಡ" ಎಂಬ ಪ್ರೀತಿಯ ಬರವಸೆಯ ಮಾತುಗಳನ್ನಾಡುವ ಮಂದಿ ಎಷ್ಟು ಜನರಿದ್ದಾರೆ? ಹೇಳಿ.

ಅಲ್ಲೆಲ್ಲೋ ಮಾತು ಶುರುವಾಗಿರಬಹುದು. ಇವನೆಲ್ಲೋ ಹುಚ್ಚ. ಅವತ್ತೆಲ್ಲಿ? ಇವತ್ತೆಲ್ಲಿ? ಅಂದಿನ ಜನರ ಬದುಕೆಲ್ಲಿ? ಇಂದಿನ ಜನರ ಬದುಕೆಲ್ಲಿ? ನಾಲ್ಕು ಜನರಂತೆ ನಾವಿರ ಬೇಡವೇ? ಅದಕ್ಕಾಗಿ ಲಕ್ಷ ಲಕ್ಷ ದುಡಿಯದಿದ್ದರೆ ನಮ್ಮ ಮಕ್ಕಳ ಕೈಗೆ ಕೊಡಬೇಕಾಗುತ್ತದೆ ಚಿಪ್ಪು   !!!

ಹೌದು, ಈ ಮಾತು ನನ್ನ ಕಿವಿಗೆ ಬೀಳುತ್ತಲೇ ಇರುತ್ತದೆ. ಆಗ ಕನಿಕರ ಪಡುವಂತಾಗುತ್ತದೆ. ಅಯ್ಯೋ, ಭಗವಂತಾ!  ದುಡಿದು, ದುಡಿದು, ಹೊಟ್ಟೆಗೆ ತಿನ್ನಲೂ ಪುರಸೊತ್ತಿಲ್ಲದಂತೆ ದುಡಿದು, ಗಂಡ   ಹೆಂಡತಿ ಹಗಲು ರಾತ್ರಿ ಎನ್ನದೆ ಪಾಳಿಯಲ್ಲಿ ದುಡಿದು, ಕೆಲಸ ಮುಗಿಸಿ ನಡುರಾತ್ರಿಯಲ್ಲಿ ಕ್ಯಾಬ್ ನಲ್ಲಿ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂದು ಬರುತ್ತಿದ್ದೀರಲ್ಲಾ! ಇದು ನಿಮಗೆ ಬೇಕಾ? ಇಂತಾ ದುಡಿಮೆ ಮಾಡಿ ಬಂಗಲೆಯ ಜೀವನ ಮಾಡಬೇಕಾ? ಅಪ್ಪ-ಅಮ್ಮ ಮನೆಯಲ್ಲಿಲ್ಲದೆ ಮಕ್ಕಳು ಮಾತ್ರ ಮನೆಯಲ್ಲಿದ್ದಾಗ ಏನೇನು ಅಚಾತುರ್ಯ ನಡೀತಿದೆ? ಎಂಬಾ ಅರಿವೇ ನಿಮಗಿಲ್ಲವಲ್ಲಾ! ಎಂಬ ದೀನ ನುಡಿಯು ಯಾರ ಕಿವಿಗೂ ಬೀಳುವುದೇ ಇಲ್ಲ.

ನಮ್ಮಂತ ಅತ್ತಲೂ ಇಲ್ಲ-ಇತ್ತಲೂ ಇಲ್ಲದ ತ್ರಿಶಂಕುಗಳು ಉಗುಳಲಾರದೆ ಬಿಸಿ ತುಪ್ಪವ ನುಂಗಲಾರದೆ ಪರದಾಡುತ್ತಿರುವ ನನ್ನ ವಯೋಮಾನದ ಜನರಿದ್ದಾರಲ್ಲಾ, ಅವರದು ಬಲು ಕಷ್ಟ ರೀ.

ಅಂದು ನಮ್ಮ ಮನೆಯಲ್ಲಿದ್ದುದು  5X10 ಅಡಿಯ ಹಳೆಯ ಜಮಖಾನ. ಹಳ್ಳಿಯಲ್ಲಿ  ಹಳೆಯ ನಾಡಹೆಂಚಿನ ಮನೆ. ಮನೆ ತುಂಬಾ ಜನ.
ಇಂದು ಮನೆಯಲ್ಲಿ ಇಪ್ಪತ್ತು ಜನ ಬಂದರೂ ಊಟಕ್ಕೂ ಕೊರತೆ ಇಲ್ಲ. ಮಲಗಲೂ ಚಿಂತೆ   ಇಲ್ಲ. ಮನೆಯಲ್ಲಿ ನಾವಿಬ್ಬರು. ನಾವೇ ಇಬ್ಬರು.

ನಮ್ಮಂತ ಅಪ್ಪ-ಅಮ್ಮಂದಿರಿಗೆ ಮಕ್ಕಳು ಹೇಳಿಬಿಡಬಹುದು " ಮನೆಯನ್ನು ಬಾಡಿಗೆಗೆ ಕೊಟ್ಟು ನಮ್ಮೊಡನೆ ಬಂದು ಇದ್ದು ಬಿಡಿ. ಬಾಡಿಗೆಗೆ ಕೊಟ್ಟು ಹೋಗಿ ಬಿಡಲು 15 ದಿನಗಳು ಸಾಕು. ಈ ಸ್ಥಿತಿಗೆ ಬರಲು ಅದರ ಹಿಂದಿರುವ 40ವರ್ಷಗಳ ಬೆವರಿನ ವಾಸನೆ ನಮ್ಮ ಮನೆಯ ಇಟ್ಟಿಗೆ ಕಣಕಣದಲ್ಲೂ ಸೇರಿದೆಯಲ್ಲಾ!

ಅದಕ್ಕೇನು ಮಾಡಬೇಕು ಅಂತೀರಾ? ಕೆಲಸ ಬಿಟ್ಟು ಬಂದು ಇಲ್ಲಿ ಕೂತು ಬಿಡೋಣವೇ? ಅಂತಾ ಮಕ್ಕಳು ಕೇಳಬಹುದು.ಅವರಿಗೆ ನಮ್ಮಂತವರ ಉತ್ತರ ಇಷ್ಟೆ. " ಮಕ್ಕಳೇ, ನೀವೆಷ್ಟು ದುಡಿದರೂ ದುಡಿಯಬೇಕೆಂಬ ಆಸೆ ತಪ್ಪುವುದಿಲ್ಲ. ನೀವು ಸುಖವಾಗಿ ಯಾವಾಗ ಸಂಸಾರ ಮಾಡುತ್ತೀರಿ? ರಸ್ತೆಯಲ್ಲಿ ಹೋಗಿ ಪಾನಿಪೂರಿ ತಿಂದು ಬಂದರೆ ಸಾಕು ಎಂದು ಕೊಂಡಿದ್ದೀರಲ್ಲಾ! ಅದಕ್ಕೂ ಮೀರಿದ ಸುಖ ಸಂಸಾರದಲ್ಲಿದೆ. ಅದರ ಅರಿವು ನಿಮಗಿಲ್ಲ. ಅದಕ್ಕಾಗಿ ನೀವು ಏನು ಮಾಡಬಹುದು ಗೊತ್ತಾ? 20-25 ವರ್ಷ ದುಡೀರಿ. ಬೇಡ ಎನ್ನುವವರಾರು? ಆಮೇಲಾದರೂ ನಿಮ್ಮ ಅಪ್ಪ-ಅಮ್ಮನ ಮನೆಗೆ ಬನ್ನಿ .ಅಪ್ಪ-ಅಮ್ಮನ ಕಡೆಗಾಲದಲ್ಲಿ ಅವರ ಜೊತೆ ಸುಖವಾಗಿ ಜೀವನ ಮಾಡಿ. ಅವರೂ ಮಕ್ಕಳು ಮರಿ ನೋಡಿ   ಸಂತೊಷ ಪಡ್ತಾರೆ. ಅವರಿಂದ ನಿಮಗೂ ಸೆಕ್ಯೂರಿಟಿ ಫೀಲಿಂಗ್ ಬರುತ್ತೆ. ಮಕ್ಕಳಿಗೆ ಅಪ್ಪ-ಅಮ್ಮನ ಜೊತೆಗೆ ಅಜ್ಜಿ-ತಾತನ ಪ್ರೀತಿ ಸಿಗುತ್ತೆ.ನಿಜವಾಗಿ  ಕೂಡು ಕುಟುಂಬದಲ್ಲಿ ಸಿಗುವಷ್ಟು ಸಂತೋಷ, ಸಂಸ್ಕಾರ,  ಬಿಡಿ ಕುಟುಂಬದಲ್ಲಿ ಸಿಗುವುದಿಲ್ಲ. ಇದು ಇಂದಿನ ಯುವಕರೆಲ್ಲಾ ಯೋಚಿಸಬೇಕಾದ ವಿಷಯ. ಏನಂತೀರಾ?

ಸೋಮವಾರ, ಅಕ್ಟೋಬರ್ 7, 2013

3 ತಿಂಗಳ ಹಿಂದೆ 'ಸತ್ತಿದ್ದ' ಹಾವು ಮಹಿಳೆಗೆ ಕಚ್ಚಿತು!

  • 3 ತಿಂಗಳ ಹಿಂದೆ 'ಸತ್ತಿದ್ದ' ಹಾವು ಮಹಿಳೆಗೆ ಕಚ್ಚಿತು!
    • Udayavani | Oct 07, 2013

      ಹಾವನ್ನು ಪೂರ್ತಿಯಾಗಿ ಸಾಯಿಸದೇ ಬಿಟ್ರೆ ಮೂರ್‌ ತಿಂಗಳಲ್ಲ, 12 ವರ್ಷ ಆದ್ರೂ ಸೇಡು ತೀರಿಸಿಕೊಳ್ಳದೇ ಬಿಡೋದಿಲ್ಲ ಅಂತ ಅಂದುಕೊಂಡ್ರಾ? ಆದರೆ ಇಲ್ಲಿ ನಡೆದಿರೋದೇ ಬೇರೆ.

      ಚೀನದವರು ಅಂದ್ರೆ ಗೊತ್ತಿದೆಯಲ್ಲ, ಹುಳ-ಹುಪ್ಪಟ ಕೂಡ ಬಿಡೋದಿಲ್ಲ. ಹೀಗಿರುವಾಗ ಚೀನದ ಮಹಿಳೆಯೊಬ್ಬಳು ಮನೆಯ ಉಪ್ಪಿನಕಾಯಿ ಜಾಡಿಯಲ್ಲಿ ಹಾವೊಂದನ್ನು ಸಾಯಿಸಿ ಅದಕ್ಕೆ ಆಲ್ಕೋಹಾಲ್‌  ತುಂಬಿಸಿ ಇಟ್ಟಿದ್ದಳು.

      ಆದ್ರೆ 3 ತಿಂಗಳು ಬಿಟ್ಟು ನೋಡಿದ್ರೆ ಆಲ್ಕೋಹಾಲ್‌ ಸ್ವಲ್ಪ ಕಮ್ಮಿಯಾಗಿತ್ತಂತೆ. ಸರಿ ಅಂತ ಹಾಲ್ಕೋಹಾಲ್‌ ತುಂಬಿಸೋಕೆ ಅಂತ ಮುಚ್ಚಳ ತೆಗೆದಿದ್ದೇ ತಡ ಸತ್ತಿದ್ದ ಹಾವು ಭುಸ್‌ ಅಂತ ಎದ್ದು ಆಕೆಯ ಕೈ ಕಚ್ಚಿತು. ಅನಂತರ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು.

      ಅಷ್ಟಕ್ಕೂ ಮಹಿಳೆ ಏಕೆ ಹೀಗೆ ಮಾಡಿದ್ದಳು ಗೊತ್ತಾ..? ಸತ್ತ ಹಾವಿನ ಸಾರ ಹೀರಿಕೊಂಡಿರುವ ಆಲ್ಕೋಹಾಲ್‌  ಕುಡಿದ್ರೆ ಕೀಲು ನೋವು ಬಿಟ್ಟುಬಿಡುತ್ತೆ ಅನ್ನೋದು! ಹಾಗಂತ ನೀವ್‌ ಟ್ರೈ ಮಾಡೋಕ್ಕೆ ಹೋಗಬೇಡಿ, ಇದೇನಿದ್ರೂ ಚೀನೀಯರಿಗೆ ಸರಿ, ಅಲ್ಲವೇ?
    • ಕೃಪೆ: ಉದಯವಾಣಿ

ಗುರುವಾರ, ಸೆಪ್ಟೆಂಬರ್ 26, 2013

Advani- RSS, BJP and Modi; writes Justice (rtd) M Rama Jois in


Justice (rtd) M Rama Jois in Organiser
40_01_39_10_Modi_with_advani_H@@IGHT_249_W@@IDTH_328
Reason for LK Advani not attending the Parliamentary Board Meeting before which there was only one, the most important agenda was to declare Narendra Modi as Prime Ministerial candidate in the election to the Lok Sabha scheduled to be held in the first quarter of 2014 has caused consternation among myriads of BJP cadres, his admirers as well as well-wishers of BJP.  But this does not mean or to be understood to mean his high position and status in the party as well as the respect and regard he enjoys and commands in the party. The bond between Advaniji, Sangh and BJP is inseparable.
Advaniji became a swayamsevak of RSS in 1942 in Karachi when he was aged 15 and about the same time, I also became a swayamsevak at Shimoga in Karnataka.  The basic bond between Advaniji as a swayamsevak, Sangh and BJP is inseparable for according to the concept of Dr Hedgewar, the founder of RSS, once a person becomes swayamsevak he is always a swayamsevak.  It has no comparison with that of a person becoming a member of any organisation and giving it up. Advaniji has spent every ounce of his energy and every moment of his life in the selfless service to the organisation and the Nation. Indisputably  on account of his quality of head,  heart, intellect and capacity, he is a shining star in the political horizon of Bharat. He reached the penultimate position of power as Deputy Prime Minister of India. I have highlighted his selfless and dedicated service for more than four decades, in my article published in special issue of Swadesh published to commemorate four decades of dedicated service to the nation by LK Advani.  In the concluding part of the Article I stated as follows:-
Finally, all that could be said is that it is misfortune of the Nation, that an outstanding and able leader like LK Advani could not become the Prime Minister of this country at a time when the nation is facing very serious problem concerning the security of the nation, just as Sardar Patel did not become the Prime Minister.
My intimate contact with him commenced when I filed his Habeas Corpus Writ Petition alongwith those of Atal Bihari Vajpayee, Madhu Dandavate and Shyamnandan Mishra in the Karnataka High Court when patriots of such high order were arrested as a threat to internal security by Indira Gandhi Government on June 26, 1975.  Only on account of fearless discharge of professional obligation by me, I was detained in Central Jail, Bangalore along with him for more than one year. From then and thereafter, I have been in close contact with him for nearly four decades and became his great admirer.
In fact, when Narendra Modi was attacked from all sides as if he was responsible for 2002 communal riots in Gujarat, though he was not responsible and those really responsible for 2002 riots were those who engineered the burning alive of 60 Ram Bhakts at Godhra, gave greave provocation.  In view of such wide anti-propaganda against Narendra Modi, the then Prime Minister Atal Bihari Vajpayee felt that Narendra Modi should resign.  Then, Advaniji alongwith Sudarshanji, the then Sarsanghachalak of RSS stood firmly behind Narendra Modi and opposed the demand for his resignation for no fault of his. Today, there is overwhelming support in favour of Narendra Modi for being a Prime Ministerial candidate in 2014 among swayamsevaks, BJP cadres and also generally among the people.
But the fact remains that Advaniji always enjoys the highest position in the organisational hierarchy and it remains intact even now.  The bond between him, Sangh and BJP is organic and divine and therefore inseparable.  His guidance and appeal is indispensable for the BJP both in the election to the four State Assemblies slated this year and to the Lok Sabha election in 2014 and that the bruise caused by his  absence at the Parliamentary Board Meeting at which Narendra Modi was anointed as Prime Ministerial candidate will be healed quickly and his dedicated leadership will be available to the BJP in a more resplendent manner.

ಸೋಮವಾರ, ಆಗಸ್ಟ್ 12, 2013

ವೇದೋಕ್ತ ಜೀವನ ಶಿಬಿರ


ವೇದಭಾರತೀ, ಹಾಸನ


ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.

14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ

ಬುಧವಾರ, ಆಗಸ್ಟ್ 7, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ


ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು


ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ

ಶಿಬಿರದ ಬಗ್ಗೆ ಕೆಲವು ಮಾಹಿತಿಗಳು:
1.ಬೆಳಿಗ್ಗೆ ಮತ್ತು ಸಂಜೆ  ಸಂಧ್ಯೋಪಾಸನೆ  ಮತ್ತು ಅಗ್ನಿಹೋತ್ರ ಅಭ್ಯಾಸ
2.ವೇದಮಂತ್ರಾಭ್ಯಾಸ
3.ವೇದೋಕ್ತ ಜೀವನದ ಬಗ್ಗೆ ಶರ್ಮರ ಮಾರ್ಗದರ್ಶನ[ ದಿನದಲ್ಲಿ ನಾಲ್ಕು   ಅವಧಿಗಳು]
4.ಪ್ರತಿದಿನ  ಸಂಜೆ ಶ್ರೀಸುಧಾಕರಶರ್ಮರ ಸಾರ್ವಜನಿಕ ಉಪನ್ಯಾಸ
5.ಮುಕ್ತ ಚರ್ಚೆಗೆ ಅವಕಾಶ
6.ಸರಳವಾದ ಊಟೋಪಚಾರ
7.ತಂಗಲು ವ್ಯವಸ್ಥೆ
8.ಶಿಬಿರಶುಲ್ಕ ರೂ: 500.00

 ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಶಿಬಿರಾರ್ಥಿಗಳು
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
8. ಗುರುಪ್ರಸಾದ್, ಭದ್ರಾವತಿ
9.ಮಹೇಶ್, ಭದ್ರಾವತಿ
10. ಕೆ.ಜಿ.ಕಾರ್ನಾಡ್,ತುಮಕೂರು
11.ಮೋಹನ್ ಕುಮಾರ್, ನಂಜನಗೂಡು
12. ಕವಿ ನಾಗರಾಜ್,ಹಾಸನ
13. ಶ್ರೀನಿವಾಸ್, AIR,ಹಾಸನ
14. ಹರಿಹರಪುರಶ್ರೀಧರ್,ಹಾಸನ
15. ಪ್ರೇಮಾ ಭಗಿನಿ,ಹಾಸನ
16. ಚಿನ್ನಪ್ಪ,ಹಾಸನ
17. ಅಶೋಕ್,ಹಾಸನ
18.ಶ್ರೀಮತೀ ಶೈಲ,ಹಾಸನ
19.ಪಾಂಡುರಂಗ ,ಹಾಸನ      
20.ಸತೀಶ್,ಹಾಸನ
21.ಲೋಕೇಶ್,ಹಾಸನ
22.ಆದಿಶೇಷ್,ಹಾಸನ
23.ಕೇಶವಮೂರ್ತಿ,ಹಾಸನ
24.ಬೈರಪ್ಪಾಜಿ ,ಹಾಸನ
ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
[ಇವರುಗಳು ತಮ್ಮ ಭಾಗವಹಿಸುವಿಕೆಯನ್ನು vedasudhe@gmail.com ಗೆ ಮೇಲ್ ಮಾಡುವುದರ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು  ದೃಢಪಡಿಸಲು ಕೋರಿದೆ]
1. ಶಿವಕುಮಾರ್, ಬೆಂಗಳೂರು
2. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
3. ವಿನಯ್ ಕಾಶ್ಯಪ್, ಬೆಂಗಳೂರು
4 .ಶರಣಪ್ಪ, ಗದಗ್
5. ವಿಜಯ್ ಹೆರಗು, ಬೆಗಳೂರು
6. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
7. ಶ್ರೀ ಹರ್ಷ,ಹಾಸನ
8. ನಟರಾಜ್ ಪಂಡಿತ್,ಹಾಸನ
9. ಶ್ರೀ ನಾಥ್,ಹಾಸನ
10. ಕೆ.ವಿ.ರಾಮಸ್ವಾಮಿ, ಹಾಸನ 

ಶಿಬಿರಶುಲ್ಕವನ್ನು ಈಗಾಗಲೇ ಪಾವತಿಸಿದ್ದು  ಶಿಬಿರಾರ್ಥಿಗಳ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಶಿಬಿರಕ್ಕೆ ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಇಚ್ಛೆಯುಳ್ಳವರು vedasudhe@gmail.com ಗೆ ಮೇಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.

-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ

ಮಂಗಳವಾರ, ಜುಲೈ 30, 2013

ವಿದೇಶದಲ್ಲಿ ತನ್ನ ಚಾಪು ಮೂಡಿಸಿದ ಕ್ರಿಕೆಟ್ ಪಟು ಶ್ರೀಕಂಠ








ನನ್ನ ಮಗ ಶ್ರೀಕಂಠನ ಬಗ್ಗೆ ನನಗೆ ಹೆಮ್ಮೆ ಇದೆ.ಕಾರಣ ಅವನು  ಏನೋ ದುಡಿಯುತ್ತಿದ್ದಾನೆಂದಲ್ಲ. ಬಿ.ಇ. ಓದುವಾಗ ಬಾಲ್ ಬ್ಯಾಡ್ಮಿಟನ್ ಕ್ರೀಡೆಯಲ್ಲಿ ಕೀರ್ತಿಗಳಿಸಿದ್ದವನು ಇನ್ಫೊಸಿಸ್ ನಿಂದ ಪ್ರಾಜೆಕ್ಟ್ ಮೇಲೆ ನೆದರ್ಲ್ಯಾಂಡ್ಸ್ಗೆಹೋದವನು ಅಲ್ಲಿ ಕ್ರಿಕೆಟ್ ಆಟದಲ್ಲಿ ಸಾಧನೆ ಮಾಡಿದ್ದಾನೆ. ಅಲ್ಲಿನ ಟಿ.ವಿಯಲ್ಲಿ  ಇವನ ಆಟದ ದೃಶ್ಯಗಳು ಬಿತ್ತರಿಸಲ್ಪಟ್ಟಿವೆ. ಇಂದು ಅಲ್ಲಿಂದ ಸ್ವದೇಶಕ್ಕೆ  ಹಿಂದಿರುಗುತ್ತಿದ್ದಾನೆ. ಅಲ್ಲಿನ ಆಟಗಾರರೆಲ್ಲಾ ಸಹಿಮಾಡಿರುವ ಕ್ರಿಕೆಟ್ ಬ್ಯಾಟ್ ಇವನಿಗೆ ಪ್ರೆಸೆಂಟ್ ಮಾಡಿದ್ದಾರೆ. ಭಗವಂತನು ನನ್ನ ಮಗನಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯವನ್ನಿತ್ತು ಭಾರತಕ್ಕೆ ಕೀರ್ತಿ ತರುವಂತಹ ಸಾಧನೆಯನ್ನು ಮಾಡಲೆಂದು ಹರಸುತ್ತೇನೆ.


ತನ್ನ ಫೇಸ್ ಬುಕ್ ನಲ್ಲಿ ಶ್ರೀಕಂಠನು ಈ ಬಗ್ಗೆ ಬರೆದಿದ್ದಾನೆ
 4 seasons of wonderful cricket in Netherlands comes to an end now . Thanks a lot for all the support , encouragement and appreciations. Special thanks to Qui Vive Cricket Club for the wonderful gift (toy bat with all team member's signature). — with Sandip Patil, Pawan Sharma, Satya Srungarapu, Saksham Sarode, Venu Ireddy, Amarjeet Jha, Hobby Singh Randhawa, Keshav Ranjan, Nitin Potdar and Hardeep Rana.

 ಅವನ ಮಿತ್ರರ ಕಾಮೆಂಟ್ಸ್ ನಲ್ಲಿ ಕೆಲವು ಇಲ್ಲಿದೆ.
 Abid Shazad Malik : 
   Too bad bhai, enjoyed playing against you. Hope to see you in the near future again
 Srikanta Hs ,Ya hope to be back and play more Zahir Doekhie No!!!!!!!!!!!!!!!!!! You must play against Hercules!!!! Devidas S Maller Welkom back ...

 Ramachandraiah Mohan
ONE WAY I AM HAPPY, OTHER WAY I AM UNHAPPY BECAUSE YOU MAY NOT PLAY CRICKET LIKE IN AMSTERDAM.

 Srikanta Hs @zahir I really wanted to ,but I will miss

 ಹರಿಹರಪುರ ಶ್ರೀಧರ್
 Show your skill in India also my boy.Welcome to Motherland.

 Hasrat Bagkari
Have a great trip back home with full of memories. Hope to catch you in India and definatelly follow you on FB

 Pawan Sharma
QuiVive is honoured to have such a fantastic cricketer like you.... I still remember those days when we were swapping positions between point and square leg.. and making sure to be back up for each others for direct throws... :-)) Also, targeting a single stump while bowling during net practices... and really speaking many more.. Great to share the ground with such an enthusiastic player... Always been my favourite opening batsman.... You will be missed surely... take care buddy and enjoy every moment of life wherever you are...Wish to see you again very soon... :-))

ಭಾನುವಾರ, ಜೂನ್ 2, 2013

ಅಂತರಜಾಲದ ಬಂಧುಗಳು

ಕವಿ ನಾಗರಾಜ್, ಸಾತ್ವಿಕ್,ಶರತ್, ಹೆಚ್.ಎಸ್. ಸುಬ್ರಹ್ಮಣ್ಯ, ಅಶೋಕ್

ಶರತ್, ಹೆಚ್.ಎಸ್. ಸುಬ್ರಹ್ಮಣ್ಯ, ಅಶೋಕ್, ಕವಿ ನಾಗರಾಜ್, ಸಾತ್ವಿಕ್,

ಶರತ್,  ಅಶೋಕ್,ಶ್ರೀಧರ್, ಕವಿ ನಾಗರಾಜ್, ಸಾತ್ವಿಕ್,

ಶನಿವಾರ, ಮೇ 25, 2013

In Pictures: A disappointed LK Advani quits BJP, explores other options


After a brief hiatus, veteran BJP leader, LK Advani, once again trained his guns on the BJP in his blog, where he slammed the party’s central leadership for its “opportunistic handling” of former Karnataka CM B S Yeddyurappa. The blog post triggered a sequence of unreal events that our ace photographer, Atul Baskarbe, once again managed to capture:







































































Thanks to.. . . . ashwinkumar-photo Ashwin Kumar

The UnReal Times


ಭಾನುವಾರ, ಮೇ 5, 2013

ನಾವು ಇಂತಾ ಮಕ್ಕಳನ್ನೂ ನೋಡಬೇಕು













ತೀರ್ಥಹಳ್ಳಿಯ ಸಮೀಪ ಪಟ್ಲಮನೆಗೆ ನಮ್ಮ ಬಂಧುಗಳ ಮನೆಗೆ ಹೋಗಿದ್ದೆವು. ಅಲ್ಲೇ ಹತ್ತಿರದ " ಚಿಬ್ಬಲಗಟ್ಟೆ" ಎಂಬಲ್ಲಿ ತುಂಗಭದ್ರಾ ನದಿದಂಡೆಯಲ್ಲಿ ನಾಲ್ಕು ಗುಡಿಸಲನ್ನು ನೋಡಿದಾಗ ಅಲ್ಲಿದ್ದ ಮಕ್ಕಳಬಗ್ಗೆ ಕುತೂಹಲ ಉಂಟಾಗಿ ಮಕ್ಕಳೊಡನೆ ಸ್ವಲ್ಪ ಕಾಲ ಕಳೆಯಬೇಕೆನಿಸಿತು. ನದಿಯ ದಂಡೆಯಲ್ಲಿ ಮುಳ್ಳು ಕಲ್ಲುಗಳ ಮಧ್ಯೆ ಈ ಮಕ್ಕಳು ಊಟಮಾಡುತ್ತಿದ್ದ ದೃಶ್ಯ ಕಂಡು ಬೆರಗಾದೆ. ಮಕ್ಕಳನ್ನೂ ಅವರ ತಂದೆ ತಾಯಿಯರನ್ನೂ ಮಾತನಾಡಿಸಿದಾಗ ತಿಳಿದ ವಿಶಯವು ನನ್ನನ್ನು ರೋಮಾಂಚನ ಗೊಳಿಸಿತು. ತರೀಕೆರೆಯಲ್ಲಿ ವಾಸಮಾಡುವ ಇವರ ಮೂಲ ಆಂದ್ರ. ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ತರೀಕೆರೆಯಲ್ಲಿ ವ್ಯವಸಾಯ ವೃತ್ತಿ ಮಾಡುವ ಈ ಮಕ್ಕಳ ಪೋಷಕರು ಬೇಸಿಗೆಯಲ್ಲಿ ಇಲ್ಲಿ ಬಂದು ನದಿಯಲ್ಲಿ ಮರಳು ತೆಗೆದು ಲಾರಿಗೆ ಲೋಡ್ ಮಾಡುವ ಕೆಲಸ ಮಾಡುತ್ತಾರೆ. ಒಂದೇ ಕುಟುಂಬದ ಏಳೆಂಟು ಜನರು ಬೆಳಗಿನಿಂದ ಸಂಜೆ ವರಗೆ ಮರಳು ಲೋಡ್ ಮಾಡಿ ದಿನದಲ್ಲಿ ಗಳಿಸುವ ಕೂಲಿ ಎಷ್ಟು ಗೊತ್ತಾ? ಎಂಟರಿಂದ ಹತ್ತು ಸಾವಿರ ರೂಪಾಯಿ!! ಇವರೇನೂ ಮರಳು ದಂಧೆ ಮಾಡುವುದಿಲ್ಲ. ಮಾಡೋರೆಲ್ಲಾ ಉಳ್ಳವರು. ಇವರು ಮಾಡೋದು ಕೂಲಿ. ಹೀಗೇ ಎರಡು ಮೂರು ತಿಂಗಳು ಕೂಲಿ ಮಾಡಿ ಗಳಿಸುವ ಕೂಲಿಯ ಅಂದಾಜು ನಿಮಗೆ ಈಗಾಗಲೇ ಕಲ್ಪನೆಗೆ ಸಿಕ್ಕಿರಬಹುದು. ಮೈ ಮುರಿದು ದುಡಿದರೆ ಬಡತನಕ್ಕೆ ಆಸ್ಪದವೆಲ್ಲಿ? ದುಡಿಯುವಾಗ ಪಡುವ ಶ್ರಮ ಏನೂ ಕಮ್ಮಿ ಇಲ್ಲ. ಆದರೆ ಅಲ್ಲಿದ್ದ ಒಬ್ಬ ವ್ಯಕ್ತಿಯ ಹೊರತಾಗಿ ಯಾರೂ ಮದ್ಯ ಸೇವಿಸುವುದಿಲ್ಲ. ಅಲ್ಲಿದ್ದ ಒಬ್ಬ ಶ್ರಮ ಜೀವಿಯನ್ನು ಮಾತನಾಡಿಸಿದೆ. ಆತನ ಮಗಳು BBM ಮಾಡುತ್ತಿದ್ದಾಳೆ. ಮುಂದೂ ಓದುತ್ತಾಳೆ. ಇಲ್ಲಿರುವ ಒಂದು ಮಗುವನ್ನು ಮಾತನಾಡಿಸಿರುವೆ. ಅದರ ವೀಡಿಯೋ  ನೋಡಿ. ನಿಜವಾಗಿ ಇವರನ್ನು ನೋಡಿದಾಗ ಅವರ ಶ್ರಮದ ದುಡಿಮೆ ಕಂಡು ಅಚ್ಚರಿಯಾಯ್ತು. ಕಷ್ಟಪಟ್ಟರೆ ಫಲ ಉಂಟು ಎಂದು ಉಪದೇಶ ಮಾಡಿದರೆ ಸಾಕೇ? ಇಲ್ಲಿ ಜೀವಂತ ಉಧಾಹರಣೆ ಕಂಡೆ. ಮಕ್ಕಳಿಗೆ ಚಂದ್ರನನ್ನು ತೋರಿಸಿಕೊಂಡು ಊಟಮಾಡಿಸುವ ತಾಯಂದಿರನ್ನು ನೋಡಿರುವ ನಾವು ಇಂತಾ ಮಕ್ಕಳನ್ನೂ ನೋಡಬೇಕು. ನಮ್ಮ ಮಕ್ಕಳಿಗೆ ಇಂತಾ ಮಕ್ಕಳನ್ನೂ ತೋರಿಸಬೇಕು. ಏನಂತೀರಾ?

ಪಟ್ಲಮನೆ ಉಲ್ಲಾಸಭರಿತ ಪ್ರವಾಸ

ಇವರೇ  ನಮ್ಮ ಪಟ್ಲಮನೆ ಪ್ರಸನ್ನ

ಪ್ರಸನ್ನ ಅವರ ತಂಗಿ ಸುಧಾ ಮತ್ತು ಭಾವ ದತ್ತಾತ್ರೇಯ


ನಮ್ಮ ದಂಡು








ಗಿರಿಜಮ್ಮನವರ ಆತಿಥ್ಯ





ಗಿರಿಜಮ್ಮನವರ ಆತಿಥ್ಯ


















ಅಲ್ಲೊಂದು ಗಣಪತಿ ಹೋಮ























ಹೀರೋ ರಮೇಶ್