ಸೋಮವಾರ, ಜನವರಿ 7, 2013

ನೈಟ್ ಶಿಫ್ಟ್ ಡ್ಯೂಟಿ

ಬೆಂಗಳೂರು, ಜ.7: ನೈಟ್ ಶಿಫ್ಟ್ ಡ್ಯೂಟಿಗೆ ಹೋಗುವ ಗಂಡನ ಜೊತೆ ಬಾಳಲಾಗದೆ ಗೃಹಿಣಿಯೊಬ್ಬಳು ಸರಿಯಾದ ಸುಖ ಸಿಗದೆ ಬಾಳುವುದೇ ವೇಸ್ಟ್ ಎಂದೆನಿಸಿ ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ ಬಿಎಂಸಿ ಬಡಾವಣೆ ನಿವಾಸಿ 26 ವರ್ಷದ ರಮ್ಯಾ ಮೃತಪಟ್ಟ ದುರ್ದೈವಿ. ರಮ್ಯಾ ಅವರ ಪತಿ ರಾಜಶೇಖರ್ ಅವರು ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕೋರಮಂಗಲದ ಅನಿಮೇಷನ್ ತಂತ್ರಜ್ಞಾನ ಕಂಪನಿಯಲ್ಲಿ ರಮ್ಯಾ ಉದ್ಯೊಗಿಯಾಗಿದ್ದರು. ಮೂರು ವರ್ಷಗಳ ಹಿಂದೆ ರಮ್ಯಾ ಅವರು ಎಲೆಕ್ಟ್ರಾನಿಕ್ ಸಿಟಿಯ ಎಚ್ ಪಿ ಕಂಪನಿಯ ಉದ್ಯೋಗಿ ರಾಜಶೇಖರ್ ಅವರನ್ನು ಮೆಚ್ಚಿ ಮದುವೆಯಾಗಿದ್ದರು. ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡಲು ಇಬ್ಬರ ಶಿಫ್ಟ್ ಕೆಲಸವೇ ಕಾರಣ ಎಂದು ತಿಳಿದು ಬಂದಿದೆ. ರಾಜಶೇಖರ್ ನೈಟ್ ಶಿಫ್ಟ್ ಆದರೆ, ರಮ್ಯಾ ಡೇ ಶಿಫ್ಟ್ ವರ್ಕ್ ನಲ್ಲಿರುತ್ತಿದ್ದರು. ವೀಕೇಂಡ್ ಮಾತ್ರ ರಮ್ಯಾ ಹಾಗೂ ರಾಜಶೇಖರ್ ಅವರು ಸರಸ ಸಲ್ಲಾಪಕ್ಕೆ ಸಮಯ ಸಿಗುತ್ತಿತ್ತು. ಭಾನುವಾರ ಕ್ರಿಕೆಟ್ ಮ್ಯಾಚ್ ನೋಡಲು ಅಪ್ಪ ಅಮ್ಮನ ಮನೆಗೆ ಹೋಗಿದ್ದ ರಾಜಶೇಖರ್ ಅಲ್ಲೇ ಉಳಿದು ಬಿಟ್ಟರು. ಇಡೀ ದಿನ ಗಂಡನ ಸಾಂಗತ್ಯ ಸಿಗದೆ ಬೇಸತ್ತ ರಮ್ಯಾ ಕಣ್ಣೀರಿಟ್ಟಿದ್ದಾಳೆ. ರಾತ್ರಿ ವೇಳೆಗೆ ಮನೆಗೆ ಹಿಂತಿರುಗಿದ ರಾಜಶೇಖರ್ ಜೊತೆ ರಮ್ಯಾ ಜಗಳ ತೆಗೆದಿದ್ದಾಳೆ. ಸಂಡೇ ಕೂಡಾ ನನ್ನ ಜೊತೆ ಇರಲು ಆಗುವುದಿಲ್ಲವೇ? ಇದೇ ನೀನು ಸಂಸಾರ ಮಾಡುವ ರೀತಿ ಎಂದು ರಮ್ಯಾ ಪ್ರಶ್ನಿಸಿದ್ದಾಳೆ. ಆದರೆ, ಇದಕ್ಕೆ ಕ್ಯಾರೆ ಎನ್ನದ ರಾಜಶೇಖರ್ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ರಮ್ಯಾ ಹೊರಗಡೆಯಿಂದ ಎಷ್ಟೇ ಬೊಬ್ಬೆ ಹಾಕಿದರು ರಾಜಶೇಖರ್ ಓಗೊಡುವುದಿಲ್ಲ. ಫೋನ್ ಕಾಲ್ ಮಾಡಿದರೆ ರಾಜಶೇಖರ್ ಕಟ್ ಮಾಡುತ್ತಾನೆ. ಇದರಿಂದ ತೀವ್ರ ಬೇಸತ್ತ ರಮ್ಯಾ ವೇಲ್ ನಿಂದ ಬಿಗಿದುಕೊಂಡು ಸಾವನ್ನಪ್ಪಲು ಯತ್ನಿಸುತ್ತಾಳೆ. ಆತ್ಮಹತ್ಯೆ ಪ್ರಯತ್ನದಲ್ಲಿ ನೆಲಕ್ಕೆ ಬೀಳುತ್ತಾಳೆ. ರಮ್ಯಾ ರೂಮಿನಿಂದ ಶಬ್ದ ಕೇಳಿ ಓಡಿ ಬಂದ ರಾಜಶೇಖರ್ ಗೆ ಶಾಕ್ ಆಗುತ್ತದೆ. ರಮ್ಯಾಳನ್ನು ಉಳಿಸಲು ಯತ್ನಿಸುತ್ತಾನೆ. ಆದರೆ, ಉಸಿರುಗಟ್ಟಿದ್ದಲ್ಲದೆ, ಹಣೆದು ಬಡಿದಿದ್ದರಿಂದ ರಕ್ತ ಸೋರಿ, ರಮ್ಯಾ ಸಾವನ್ನಪ್ಪುತ್ತಾಳೆ. ಈ ನಡುವೆ ಮಗಳ ಸಾವಿನ ಸುದ್ದಿ ಕೇಳಿ ಹೌಹಾರಿದ ರಮ್ಯಾ ಪೋಷಕರು, ರಾಜಶೇಖರನನ್ನು ಮನಸಾರೆ ಬೈಯ್ದಿದ್ದಾರೆ. ಮದುವೆ ಸಂದರ್ಭದಲ್ಲಿ 1 ಲಕ್ಷ ನಗದು, ಚಿನ್ನಾಭರಣ ವರದಕ್ಷಿಣೆ ನೀಡಿದ್ದೆವು. ಆದರೂ ಮಗಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ರಮ್ಯಾ ತಂದೆ ವೆಂಕಟಾಚಲಯ್ಯ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕುಮಾರ್ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂಡು ಡಿಸಿಪಿ ಡಾ. ಡಿಸಿ ರಾಜಪ್ಪ ಹೇಳಿದ್ದಾರೆ.    [ ಅಭಿಪ್ರಾಯ ಬರೆಯಿರಿ ]   [ ನಿಮ್ಮ ಸ್ನೇಹಿತರಿಗೆ ಕಳಿಸಿ  ]
ಕೃಪೆ: http://kannada.oneindia.in


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ