ಸೋಮವಾರ, ಅಕ್ಟೋಬರ್ 7, 2013

3 ತಿಂಗಳ ಹಿಂದೆ 'ಸತ್ತಿದ್ದ' ಹಾವು ಮಹಿಳೆಗೆ ಕಚ್ಚಿತು!

  • 3 ತಿಂಗಳ ಹಿಂದೆ 'ಸತ್ತಿದ್ದ' ಹಾವು ಮಹಿಳೆಗೆ ಕಚ್ಚಿತು!
    • Udayavani | Oct 07, 2013

      ಹಾವನ್ನು ಪೂರ್ತಿಯಾಗಿ ಸಾಯಿಸದೇ ಬಿಟ್ರೆ ಮೂರ್‌ ತಿಂಗಳಲ್ಲ, 12 ವರ್ಷ ಆದ್ರೂ ಸೇಡು ತೀರಿಸಿಕೊಳ್ಳದೇ ಬಿಡೋದಿಲ್ಲ ಅಂತ ಅಂದುಕೊಂಡ್ರಾ? ಆದರೆ ಇಲ್ಲಿ ನಡೆದಿರೋದೇ ಬೇರೆ.

      ಚೀನದವರು ಅಂದ್ರೆ ಗೊತ್ತಿದೆಯಲ್ಲ, ಹುಳ-ಹುಪ್ಪಟ ಕೂಡ ಬಿಡೋದಿಲ್ಲ. ಹೀಗಿರುವಾಗ ಚೀನದ ಮಹಿಳೆಯೊಬ್ಬಳು ಮನೆಯ ಉಪ್ಪಿನಕಾಯಿ ಜಾಡಿಯಲ್ಲಿ ಹಾವೊಂದನ್ನು ಸಾಯಿಸಿ ಅದಕ್ಕೆ ಆಲ್ಕೋಹಾಲ್‌  ತುಂಬಿಸಿ ಇಟ್ಟಿದ್ದಳು.

      ಆದ್ರೆ 3 ತಿಂಗಳು ಬಿಟ್ಟು ನೋಡಿದ್ರೆ ಆಲ್ಕೋಹಾಲ್‌ ಸ್ವಲ್ಪ ಕಮ್ಮಿಯಾಗಿತ್ತಂತೆ. ಸರಿ ಅಂತ ಹಾಲ್ಕೋಹಾಲ್‌ ತುಂಬಿಸೋಕೆ ಅಂತ ಮುಚ್ಚಳ ತೆಗೆದಿದ್ದೇ ತಡ ಸತ್ತಿದ್ದ ಹಾವು ಭುಸ್‌ ಅಂತ ಎದ್ದು ಆಕೆಯ ಕೈ ಕಚ್ಚಿತು. ಅನಂತರ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು.

      ಅಷ್ಟಕ್ಕೂ ಮಹಿಳೆ ಏಕೆ ಹೀಗೆ ಮಾಡಿದ್ದಳು ಗೊತ್ತಾ..? ಸತ್ತ ಹಾವಿನ ಸಾರ ಹೀರಿಕೊಂಡಿರುವ ಆಲ್ಕೋಹಾಲ್‌  ಕುಡಿದ್ರೆ ಕೀಲು ನೋವು ಬಿಟ್ಟುಬಿಡುತ್ತೆ ಅನ್ನೋದು! ಹಾಗಂತ ನೀವ್‌ ಟ್ರೈ ಮಾಡೋಕ್ಕೆ ಹೋಗಬೇಡಿ, ಇದೇನಿದ್ರೂ ಚೀನೀಯರಿಗೆ ಸರಿ, ಅಲ್ಲವೇ?
    • ಕೃಪೆ: ಉದಯವಾಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ